ಸುರೇಶ ಹೆಬ್ಳೀಕರ ಒಬ್ಬ ಕನ್ನಡ ಚಿತ್ರನಿರ್ಮಾಪಕರು , ನಿರ್ದೇಶಕರು ಮತ್ತು ನಟರು. ಅವರು ಪರಿಸರವಾದಿಯೂ ಹೌದು. ಅವರು ಅನೇಕ ಗಮನಾರ್ಹ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದು ಅವುಗಳಲ್ಲಿ 'ಕಾಡಿನ ಬೆಂಕಿ' ಚಿತ್ರವು ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ , 'ಉಷಾ ಕಿರಣ' ಚಿತ್ರವು ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಗೆದ್ದಿವೆ. ಭಾವುಕ ಪ್ರಣಯ ಚಿತ್ರಿತವಾಗಿರುವ ಅಸಾಮಾನ್ಯ ಕಥಾಹಂದರವನ್ನು ಅವರ ಚಿತ್ರಗಳು ಹೊಂದಿರುತ್ತವೆ. ಇದಕ್ಕೆ ಅವರ ರಮ್ಯತೆಯುಳ್ಳ ಬಾಲ್ಯ ಕಾರಣ ಎನ್ನಲಾಗಿದೆ. ಅವರ ಚಿತ್ರಕತೆಗಳಲ್ಲಿ ಮನೋವಿಕಾರ ಸಮಸ್ಯೆಗಳು ಮತ್ತು ವೈಜ್ಞಾನಿಕ ಮನೋಭಾವ ಎದ್ದು ಕಾಣುತ್ತಿದ್ದು ಅದಕ್ಕೆ ಮನೋವಿಶ್ಲೇಷಕರೂ ನಿರ್ಮಾಪಕರೂ ಆದ ಡಾ. ಅಶೋಕ್ ಪೈ ಅವರೊಂದಿಗಿನ ತಮ್ಮ ಸಹವಾಸ ಕಾರಣ ಎಂದು ಹೆಬ್ಳಿಕರ್ ವಿನಯದಿಂದ ಹೇಳುತ್ತಾರೆ. ಅವರು ಸ್ವತಃ ಪರಿಸರವಾದಿಯಾಗಿದ್ದು , ಅವರ ಚಿತ್ರಗಳು ನಿಸರ್ಗ ಮತ್ತು ಅದರ ಸಂರಕ್ಷಣೆ ಯನ್ನು ಚಿತ್ರಿಸುತ್ತವೆ . == ಪ್ರಶಸ್ತಿಗಳು ಮತ್ತು ಗೌರವಗಳು == ಅವರು ತಮ್ಮ 'ಆಘಾತ' ಚಿತ್ರಕ್ಕೆ ರಾಜ್ಯಪ್ರಶಸ್ತಿಯನ್ನೂ 'ಕಾಡಿನ ಬೆಂಕಿ' ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಯನ್ನೂ ' ' ಚಿತ್ರಕ್ಕೆ ಪ್ರತಿಷ್ಠಿತ ಓಸಿರಿಸ್ ಪ್ರಶಸ್ತಿಯನ್ನೂ ಗಳಿಸಿದ್ದಾರೆ. == ಚಲನಚಿತ್ರಗಳ ಪಟ್ಟಿ == ಹೆಭ್ಲೀಕರರು ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದು ಹೆಚ್ಚಿನಂಶ ಅವುಗಳಲ್ಲಿ ನಟಿಸಿಯೂ ಇದ್ದಾರೆ. ಅವರು ಅಭಿನಯಿಸಿದ ಚಿತ್ರಗಳ ಪಟ್ಟಿ ಇಲ್ಲಿದೆ. == ಇವನ್ನೂ ನೋಡಿ == ಸುನೀಲ್ ಕುಮಾರ್ ದೇಸಾಯಿ == ಉಲ್ಲೇಖಗಳು-ಆಕರಗಳು == == ಹೊರಗಿನ ಕೊಂಡಿಗಳು == 'ಚಿತ್ರರಂಗ' ದಲ್ಲಿನ ವ್ಯಕ್ತಿಚಿತ್ರ 2007-12-16 ವೇಬ್ಯಾಕ್ ಮೆಷಿನ್ ನಲ್ಲಿ. ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಸುರೇಶ್ ಹೆಬ್ಳೀಕರರ ಹಾಡು